ವರಾಹ
	ವಿಷ್ಣುವಿನ ದಶಾವತಾರಗಳಲ್ಲಿ ಮೂರನೆಯದು. ವಿಷ್ಣುವಿನ ದ್ವಾರಪಾಲಕರಾದ ಜಯವಿಜಯರು ದೇವರ್ಷಿಗಳ ಶಾಪದಿಂದ ಮೂರು ಯುಗಗಳಲ್ಲಿ ರಾಕ್ಷಸರಾಗಿ ಜನ್ಮವೆತ್ತುತ್ತಾರೆ. ಕೃತಯುಗದಲ್ಲಿ ಹಿರಣ್ಯಾಕ್ಷ ಹುಟ್ಟಿದ. ಇವನನ್ನು ಸಂಹರಿಸುವುದೇ ವರಾಹಾವತಾರದ ಉದ್ದೇಶ. ಹಿರಣ್ಯಾಕ್ಷ ಭೂಮಿಯನ್ನು ಚಾಪೆಯಂತೆ ಸುತ್ತಿ ಸಮುದ್ರದಡಿಯಲ್ಲಿಯ ತನ್ನ ನಿವಾಸಕ್ಕೆ ತೆಗೆದುಕೊಂಡು ಹೋಗಿ ಬಚ್ಚಿಟ್ಟನಂತೆ. ಆಗ ವಿಷ್ಣು ಹಂದಿ ರೂಪ ತಾಳಿ ಅವನೊಡನೆ ಯುದ್ಧಮಾಡಿ ತನ್ನ ಕೋರೆಗಳಿಂದ ಭೂಮಿಯನ್ನು ಮೇಲೆ ತಂದು ಯಥಾಸ್ಥಾನದಲ್ಲಿ ಅದನ್ನು ಪ್ರತಿಷ್ಠಾಪಿಸಿದ.			
				(ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ